RBI ಹೊಸ ಯುಪಿಐ ಮತ್ತು ಎಟಿಎಂ ನಿಯಮಗಳು 2026
UPI ಮತ್ತು ATM ನಿಯಮಗಳಲ್ಲಿ ಭಾರಿ ಬದಲಾವಣೆ: ನಿಮ್ಮ ಹಣದ ಸುರಕ್ಷತೆಗೆ ಬರುತ್ತಿದೆ ಹೊಸ 'ಡಿಜಿಟಲ್ ಬಾಡಿಗಾರ್ಡ್'
ಇಂದಿನ ಡಿಜಿಟಲ್ ಯುಗದಲ್ಲಿ ಸ್ಕ್ಯಾಮರ್‌ಗಳು ಎಷ್ಟು ಚಾಣಾಕ್ಷರಾಗಿದ್ದಾರೆಂದರೆ, ಎಐ (AI) ವಾಯ್ಸ್ ಕ್ಲೋನಿಂಗ್ ಮತ್ತು ಸಿಮ್ ಸ್ವಾಪಿಂಗ್‌ನಂತಹ ಅತ್ಯಾಧುನಿಕ ತಂತ್ರಗಳನ್ನು ಬಳಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡಬಲ್ಲರು. "ನನ್ನ ಓಟಿಪಿ (OTP) ಕಳುವಾದರೆ ಅಥವಾ ಫೋನ್ ಹ್ಯಾಕ್ ಆದರೆ ಗತಿಯೇನು?" ಎಂಬ ಭಯ ಪ್ರತಿಯೊಬ್ಬರನ್ನೂ ಕಾಡುವುದು ಸಹಜ. ಈ ಆತಂಕಕ್ಕೆ ಅಂತ್ಯ ಹಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಯುಪಿಐ ಮತ್ತು ಎಟಿಎಂ ವ್ಯವಹಾರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದೆ. ನಿಮ್ಮ ಕಷ್ಟದ ಹಣಕ್ಕೆ ರಕ್ಷಣೆ ನೀಡಲು ಈಗ ಹೊಸ 'ಡಿಜಿಟಲ್ ಬಾಡಿಗಾರ್ಡ್' ಸಿದ್ಧನಾಗಿದ್ದಾನೆ.ಡೈನಾಮಿಕ್ ಟೂ-ಫ್ಯಾಕ್ಟರ್ ಆಥೆಂಟಿಕೇಶನ್: ಕೇವಲ ಪಿನ್ ಸಾಕಾಗಲ್ಲ
ಇನ್ನು ಮುಂದೆ ಕೇವಲ ಒಂದು ಸ್ಥಿರವಾದ (Static) ಪಿನ್ ಅಥವಾ ಪಾಸ್‌ವರ್ಡ್ ನಿಮ್ಮ ಹಣವನ್ನು ರಕ್ಷಿಸಲು ಸಾಧ್ಯವಿಲ್ಲ. ಆರ್‌ಬಿಐ ಹೊಸದಾಗಿ 'ರಿಸ್ಕ್ ಬೇಸ್ಡ್ ಆಥೆಂಟಿಕೇಶನ್' ನಿಯಮವನ್ನು ಜಾರಿಗೆ ತರುತ್ತಿದೆ. ಇದರ ಅನ್ವಯ, ಪ್ರತಿ ಪಾವತಿಯ ಸಮಯದಲ್ಲಿ ಕನಿಷ್ಠ ಎರಡು ಹಂತದ ಸುರಕ್ಷತೆ ಇರಲೇಬೇಕು. ವಿಶೇಷವೆಂದರೆ, ಇದರಲ್ಲಿ ಕನಿಷ್ಠ ಒಂದು ಸುರಕ್ಷತಾ ಅಂಶ 'ಡೈನಾಮಿಕ್' ಆಗಿರಬೇಕು, ಅಂದರೆ ಅದು ಪ್ರತಿ ಬಾರಿ ಬದಲಾಗುತ್ತಿರಬೇಕು (ಉದಾಹರಣೆಗೆ ಫೇಸ್ ಐಡಿ, ಫಿಂಗರ್ ಪ್ರಿಂಟ್ ಅಥವಾ ಓಟಿಪಿ).
ಈ ವ್ಯವಸ್ಥೆಯಿಂದಾಗಿ, ಸ್ಕ್ಯಾಮರ್‌ಗಳು ಹೇಗಾದರೂ ಮಾಡಿ ನಿಮ್ಮ ಹಳೆಯ ಪಿನ್ ತಿಳಿದುಕೊಂಡರೂ ಸಹ, ನಿಮ್ಮ ಬಯೋಮೆಟ್ರಿಕ್ ಅಥವಾ ಕ್ಷಣಕ್ಷಣಕ್ಕೂ ಬದಲಾಗುವ ಡೈನಾಮಿಕ್ ಅಂಶವಿಲ್ಲದೆ ಹಣ ಲೂಟಿ ಮಾಡಲು ಸಾಧ್ಯವೇ ಇಲ್ಲ.
"ಓಟಿಪಿ ಕದ್ದರು ಇನ್ಮೇಲೆ ನಿಮ್ಮ ಹಣ ಸೇಫ್."
ಹೊಸ ಫೋನ್ ಅಥವಾ ಸಿಮ್? 24 ಗಂಟೆ ವೇಟ್ ಮಾಡಲೇಬೇಕು
ನೀವು ಹೊಸ ಫೋನ್ ಖರೀದಿಸಿದಾಗ ಅಥವಾ ಹೊಸ ಸಿಮ್ ಕಾರ್ಡ್ ಅಳವಡಿಸಿದಾಗ ತಕ್ಷಣವೇ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಆರ್‌ಬಿಐ ಇದನ್ನು 'ಕೂಲಿಂಗ್ ಪಿರಿಯಡ್' (Cooling Period) ಎಂದು ಕರೆದಿದೆ. ಹೊಸ ಡಿವೈಸ್‌ನಲ್ಲಿ ಯುಪಿಐ ಲಾಗಿನ್ ಆದ ಮೊದಲ 24 ಗಂಟೆಗಳ ಕಾಲ ವ್ಯವಹಾರದ ಮಿತಿಯನ್ನು ಕೇವಲ ₹5,000 ಕ್ಕೆ ಸೀಮಿತಗೊಳಿಸಲಾಗಿದೆ.
ಇದು ಸಿಮ್ ಸ್ವಾಪಿಂಗ್ ಫ್ರಾಡ್‌ಗಳ ವಿರುದ್ಧ ರೂಪಿಸಲಾದ 'ಮಾಸ್ಟರ್ ಪ್ಲಾನ್'. ನಿಮ್ಮ ಗಮನಕ್ಕೆ ಬಾರದೆ ಯಾರಾದರೂ ನಿಮ್ಮ ಹೆಸರಿನಲ್ಲಿ ನಕಲಿ ಸಿಮ್ ಪಡೆದು ಲಾಗಿನ್ ಆದರೂ, ಅವರು ತಕ್ಷಣವೇ ನಿಮ್ಮ ಖಾತೆ ಖಾಲಿ ಮಾಡಲು ಸಾಧ್ಯವಿಲ್ಲ. ಅಷ್ಟರೊಳಗೆ ನೀವು ಮೋಸವನ್ನು ಗುರುತಿಸಿ ಖಾತೆಯನ್ನು ಬ್ಲಾಕ್ ಮಾಡಲು ಈ 24 ಗಂಟೆಗಳ ಕಾಲಾವಕಾಶ ನಿಮಗೆ ಸಿಗುತ್ತದೆ.
ನಿಮ್ಮ ಖರ್ಚಿನ ಶೈಲಿಯ ಮೇಲೆ ಬ್ಯಾಂಕ್ ಕಣ್ಣು: ರಿಸ್ಕ್ ಬೇಸ್ಡ್ ಆಥೆಂಟಿಕೇಶನ್

RBI ಈಗ 'ಬಿಹೇವಿಯರಲ್ ಸೆಕ್ಯೂರಿಟಿ' ಅಥವಾ 'ರಿಸ್ಕ್ ಬೇಸ್ಡ್ ಆಥೆಂಟಿಕೇಶನ್' (Risk-Based Authentication) ಎಂಬ ಹೈಟೆಕ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುತ್ತಿದೆ. ಬ್ಯಾಂಕುಗಳು ಇನ್ನು ಮುಂದೆ ಎಐ ತಂತ್ರಜ್ಞಾನ ಬಳಸಿ ನಿಮ್ಮ ಹಣದ ಖರ್ಚಿನ ಶೈಲಿಯನ್ನು ಗಮನಿಸುತ್ತವೆ. ಉದಾಹರಣೆಗೆ, ನೀವು ಸಾಮಾನ್ಯವಾಗಿ ದಿನಕ್ಕೆ ₹200 ರಿಂದ ₹500 ರವರೆಗೆ ಖರ್ಚು ಮಾಡುವ ವ್ಯಕ್ತಿಯಾಗಿದ್ದು, ಇದ್ದಕ್ಕಿದ್ದಂತೆ ಅಪರಿಚಿತ ದೇಶ ಅಥವಾ ಮೂಲದಿಂದ ₹50,000 ಪಾವತಿಯ ರಿಕ್ವೆಸ್ಟ್ ಬಂದರೆ ಸಿಸ್ಟಮ್ ತಕ್ಷಣ ಅಲರ್ಟ್ ಆಗುತ್ತದೆ.
ಈ ಸಂದರ್ಭದಲ್ಲಿ ನೀವು ಸರಿಯಾದ ಪಿನ್ ನಮೂದಿಸಿದರೂ ಸಹ, ಸಿಸ್ಟಮ್‌ಗೆ ಅನುಮಾನ ಬಂದರೆ ಅದು ಹೆಚ್ಚುವರಿ ಸುರಕ್ಷತೆಗಾಗಿ ನಿಮ್ಮ ಫೇಸ್ ಸ್ಕ್ಯಾನ್ ಅಥವಾ ಫಿಂಗರ್ ಪ್ರಿಂಟ್ ಕೇಳಬಹುದು. ಈ ನಿಗಾ ವ್ಯವಸ್ಥೆಯು ನಿಮ್ಮ ಹಣಕ್ಕೆ ಕಬ್ಬಿಣದ ಕವಚದಂತಹ ಸುರಕ್ಷತೆ ನೀಡುತ್ತದೆ.
ಹೆಸರು ನೋಡಿ ಹಣ ಕಳಿಸಿ: ಸ್ಕ್ಯಾಮರ್‌ಗಳಿಗೆ ಇನ್ನು 'ಟೋಪಿ' ಹಾಕಲು ಸಾಧ್ಯವಿಲ್ಲ
ಸ್ಕ್ಯಾಮರ್‌ಗಳು ಇದುವರೆಗೆ 'ಬೆಸ್ಕಾಂ', 'ಎಲೆಕ್ಟ್ರಿಸಿಟಿ ಬೋರ್ಡ್' ಅಥವಾ 'ವಿಕ್ಕಿ 123' ನಂತಹ ನಕಲಿ ಹೆಸರುಗಳನ್ನು ಬಳಸಿ ಜನರಿಗೆ ಟೋಪಿ ಹಾಕುತ್ತಿದ್ದರು. ಆದರೆ ಹೊಸ ನಿಯಮದ ಪ್ರಕಾರ, ನೀವು ಹಣ ಕಳುಹಿಸುವ ಮುಂಚೆಯೇ ಆ ವ್ಯಕ್ತಿ ಅಥವಾ ಸಂಸ್ಥೆಯು ಬ್ಯಾಂಕ್‌ನಲ್ಲಿ ನೋಂದಾಯಿಸಿಕೊಂಡಿರುವ ಅಸಲಿ ಹೆಸರು (Verified Name) ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಅನುಸರಿಸಬೇಕಾದ ಕ್ರಮ: ಪೇಮೆಂಟ್ ಬಟನ್ ಒತ್ತುವ ಮೊದಲು ಸ್ಕ್ರೀನ್ ಮೇಲೆ ಕಾಣುವ ಹೆಸರು ನೀವು ಹಣ ಕಳುಹಿಸುತ್ತಿರುವ ವ್ಯಕ್ತಿಯದ್ದೇ ಎಂದು ಖಚಿತಪಡಿಸಿಕೊಳ್ಳಿ. ಹೆಸರು ಮ್ಯಾಚ್ ಆಗದಿದ್ದರೆ ಆ ವ್ಯವಹಾರವನ್ನು ತಕ್ಷಣವೇ ನಿಲ್ಲಿಸಿ.
ಬ್ಯಾಂಕ್ ಅಕೌಂಟ್‌ನಿಂದ ಹಣ ಕಳ್ಳತನವಾದರೆ 100% ಮರುಪಾವತಿ?
ಜುಲೈ 1, 2026 ರಿಂದ ಜಾರಿಗೆ ಬರಲಿರುವ ಈ ನಿಯಮವು ಗ್ರಾಹಕರಿಗೆ ದೊಡ್ಡ ಭರವಸೆ ನೀಡಲಿದೆ. ಒಂದು ವೇಳೆ ಬ್ಯಾಂಕ್‌ನ ಸುರಕ್ಷತಾ ವ್ಯವಸ್ಥೆಯ ವೈಫಲ್ಯದಿಂದ ಅಥವಾ ಯಾವುದೇ ಮೂರನೇ ವ್ಯಕ್ತಿಯ ಕಡೆಯಿಂದ ಭದ್ರತಾ ಉಲ್ಲಂಘನೆಯಾಗಿ ನಿಮ್ಮ ಹಣ ಕಳ್ಳತನವಾದರೆ, ಬ್ಯಾಂಕ್ ಅದಕ್ಕೆ 100% ಜವಾಬ್ದಾರಿಯಾಗಿರುತ್ತದೆ ಮತ್ತು ಹಣವನ್ನು ಮರುಪಾವತಿಸಬೇಕು





Comments
Post a Comment